ಭಾನುವಾರ, ಮೇ 30, 2021

ಏಕಮ್ ಏಕಮ್ ಕರುಣಾಕಾರಂ

 


ಏಕಮ್ ಏಕಮ್ ಕರುಣಾಕಾರಂ

“ಶಿವಾಯ ವಿಷ್ಣು ರೂಪಾಯ, ಶಿವರೂಪಾಯ ವಿಷ್ಣವೇ, 

ಶಿವಸ್ಯ ಹೃದಯಂ ವಿಷ್ಣುಃ, ವಿಷ್ನೋಷ್ಚ ಹೃದಯಂ ಶಿವಃ.”

ಇರುವನಕ ಶಿವನದೇ ವಾದ, ಇಲ್ಲವಾದಾಗ ವಿಷ್ಣು ಪಾದ.

ಇರುವನಕ ಆ ಶಿವನೇ ಆಧಾರ, ಇಲ್ಲವಾದಾಗ ವೈಕುಂಠ ಧ್ವಾರ.

ಇದ್ದಾಗ ನಿತ್ಯ ಶಿವನಿಗೆ ಅರ್ಚನೆ, ಹೋದಾಗ ವೈಕುಂಠ ಸಮಾರಾಧನೆ.

ಇರುವನಕ ರುದ್ರಕವಚದ ಆಯಾಮ, ಹೋದಾಗ ವಿಷ್ಣು ಸಹಸ್ರನಾಮ.

ಇಲ್ಲಿರುವ ಭುವಿಯೇ ಕೈಲಾಸ, ಹೊರಡು ಅಲ್ಲಿಹುದು ವೈಕುಂಠ ವಾಸ.

ಜ್ಞಾನ ಪ್ರದಾಯಕ ರೂಪಂ ಶಿವಂ, ಮೋಕ್ಷ ಪ್ರದಾಯಕ ರೂಪಂ ವಿಷ್ನುಂ,

ರೂಪಂ ಅನೇಕಂ, ನಾಮಂ ಅನೇಕಂ, ಕರುಣಾಕಾರಂ ಭಗವಂತಮೇಕಂ ಏಕಂ.  

ಪ್ರಭಾಕರ ವಿರಚಿತ ಪರಮಾರ್ಥಸತ್ಯಮೋದಕಂ, ಪ್ರಚೋದಕಂ, ಪ್ರಭೋದಕಂ.

ರಚನೆ: ಡಾ. ಪ್ರಭಾಕರ್ ಬೆಲವಾಡಿ

ಶ್ರೀ ಶಾರ್ವರಿನಾಮ ಸಂವತ್ಸರ, ಉತ್ತರಹಳ್ಳಿ, ಬೆಂಗಳೂರು.

ಆಧನಿಕ ರೈತ

ಆಧನಿಕ ರೈತ ರೈತರ ಬಗ್ಗೆ ಗೊತ್ತೇ ನಿಮಗೆ ರೈತರು ಇಹರು ಎರಡು ಬಗೆ ಅನ್ನವ ನೀಡುವ ಅನ್ನದಾತ ಕನ್ನವ ಹಾಕುವ ಕನ್ನದಾತ ಉಳುವಾ ರೈತನ ನೋಡಲ್ಲಿ ರೈತನ ನೇಗಿಲು ನೇತಲ್ಲಿ ...