ಆಧನಿಕ ರೈತ
ರೈತರ ಬಗ್ಗೆ ಗೊತ್ತೇ ನಿಮಗೆ
ರೈತರು ಇಹರು ಎರಡು ಬಗೆ
ಅನ್ನವ ನೀಡುವ ಅನ್ನದಾತ
ಕನ್ನವ ಹಾಕುವ ಕನ್ನದಾತ
ಉಳುವಾ ರೈತನ ನೋಡಲ್ಲಿ
ರೈತನ ನೇಗಿಲು ನೇತಲ್ಲಿ
ಟ್ರ್ಯಾಕ್ಟರ್ ಹರಿಸಿದ ಹೊಲದಲ್ಲಿ
ಆಧುನಿಕತೆಯ ದಿನದಲ್ಲಿ
ಎತ್ತು, ಏತ ನೆನಪಿನಲಿ
ನೀರು ಹರಿಯಲು ಪಂಪಿನಲಿ
ಬೀಜವ ಬಿತ್ತುವ ಕೈಯೆಲ್ಲಿ
ಬೆವರನು ಸುರಿಸುವ ಮೈಯೆಲ್ಲಿ
ರೈತರ ಬಗ್ಗೆ ಗೊತ್ತೇ ನಿಮಗೆ
ರೈತರು ಇಹರು ಎರಡು ಬಗೆ
ಗೊಬ್ಬರ ಹರಡಿತು ಯಂತ್ರವದು
ಅಗೋ ಔಷದಿ ಚಿಮ್ಮಿತು ತಂತ್ರವದು
ಹನಿ ನೀರಾವರಿ ಇಂದಿನ ನೀತಿ
ನೀರನು ಉಳಿಸುವ ನೂತನ ರೀತಿ
ಕಟಾವು ಮಾಡಲು ಜನ ಬೇಕಿಲ್ಲ
ಫಸಲು ಬರದಿರೆ ವಿಮೆ ಇದೆಯಲ್ಲ
ಪತ್ನಿಯು ತರುವಳು ಅನ್ನದ ಬುತ್ತಿ
ಬುಟ್ಟಿಯ ಹೊತ್ತಿ ಸಿಂಬಿಯ ಸುತ್ತಿ
ರೈತರ ಬಗ್ಗೆ ಗೊತ್ತೇ ನಿಮಗೆ
ರೈತರು ಇಹರು ಎರಡು ಬಗೆ
ಭೂಮಿಯಿಲ್ಲದ ರೈತರು ಉಂಟು
ಇವರಿಗೂ ಬೇಕು ಪುಕ್ಕಟೆ ಕರೆಂಟು
ಸಾಲ ಕಟ್ಟದೇ ಬ್ಯಾಂಕಿಗೆ ಖೋತ
ಸಾಲ ಮನ್ನಾ ಇವರ ನಿತ್ಯದ ಗಾಥ
ಅನ್ನವಿಲ್ಲದೆ ಸತ್ತ ಅನ್ನದಾತ
ಚಿನ್ನವನೇ ಬಿತ್ತ ಕನ್ನದಾತ
ಕಾಯವ ತೊರೆದ ಕಾಯಕಯೋಗಿ
ಮಣ್ಣನೆ ಕದಿಯೇ ನಾಯಕಭೋಗಿ
ಮಣ್ಣಿನ ಮಕ್ಕಳು ಇವರಂತೆ
ನುಣ್ಣನೆ ಬೋಳಿಸೋ ಕುಳವಂತೆ
ಬಿದ್ದರೂ ಮೀಸೆ ಮಣ್ಣಾಗದಂತೆ
ನುಣುಚಿಕೊಳ್ಳುವ ಗುಣವಂತೆ
ರೈತರ ಬಗ್ಗೆ ಗೊತ್ತೇ ನಿಮಗೆ
ರೈತರು ಇಹರು ಎರಡು ಬಗೆ
ರೈತಗೆ ತೋರಿಸಿ ಧರಣಿಯ ಹಾದಿ
ಕೆಲವರು ಪಡೆದರು ಸೌಧದ ಗಾದಿ.
ರಚನೆ : ಡಾ. ಪ್ರಭಾಕರ ಬೆಲವಾಡಿ
ಗುರುವಾರ, ಮಾರ್ಚ್ 23, 2023
ಬುಧವಾರ, ಮಾರ್ಚ್ 22, 2023
ಯುಗಾದಿ
ಯುಗಾದಿ ಬಂತು
ಬಂತವ್ವ ಬಂತು ವರುಷದ ಬುನಾದಿ
ಉತ್ಸಾಹದೀ ಕುಣಿವ ಈ ಯುಗಾದಿ
ಹೊಸ ವರುಷಕೆ ಹೊಸದಾದ ತೇದಿ
ಪಂಚಾಂಗ ಶ್ರವಣಕೆ ಇದುವೇ ಹಾದಿ
ಬೇವಿನ ಗಿಡದಾಗ ಚಿಗುಟವ್ವ ಹೂವು
ಬೆಲ್ಲಾವ ಬೆರೆಸಿ ಹಂಚೋಣ ನಾವು
ಬಂತವ್ವ ಬಂತು ವರುಷದ ಬುನಾದಿ
ಉತ್ಸಾಹದೀ ಕುಣಿವ ಈ ಯುಗಾದಿ
ಹೊಸ ವರುಷಕೆ ಹೊಸದಾದ ತೇದಿ
ಪಂಚಾಂಗ ಶ್ರವಣಕೆ ಇದುವೇ ಹಾದಿ
ಬೇವಿನ ಗಿಡದಾಗ ಚಿಗುಟವ್ವ ಹೂವು
ಬೆಲ್ಲಾವ ಬೆರೆಸಿ ಹಂಚೋಣ ನಾವು
ತೋರಣ ಕಟ್ಟೋಣ ತಾರವ್ವ ಬೇವು
ಚಿತ್ರಾನ್ನ ತಿನ್ನೋಣ ತುರಿಯೇ ಮಾವು
ಹೆಣ್ಣಿನ ಮೊಗದಾಗ ಹರುಷಾದ ಹೊನಲು
ಕಾತರದಿ ಕಾದಾರ ಹೊಸ ವಸ್ತ್ರವ ತೊಡಲು
ತೋಟದಾ ತುಂಬಾ ಚಿಗುರಾವೆ ಫಸಲು
ತಾರವ್ವ ಬುಟ್ಟಿ ತಿಂದಾವು ಗಿಳಿ ಮತ್ತ ಅಳಿಲು
ಊರ ತುಂಬೆಲ್ಲಾ ಬೇವಿನಾ ಒಗರು
ಸುತ್ತ ನೋಡತ್ತ ಮಾವಿನಾ ಚಿಗುರು
ಅವ್ವ ಮಾಡ್ಯಾಳ ಹೋಳಿಗೆ, ಸಾರು
ಕೈ ಕಾಲ ತೊಳೆದು ಚಪ್ಪರಿಸಿ ಹೀರು.
ಗಿಡವೆಲ್ಲಾ ಬಸಿರು ಊರೆಲ್ಲಾ ಹಸಿರು
ಎಳೆಯೋ ತೇರು ಬಿಡದೇ ಉಸಿರು
ಗುಡಿ ಗೋಪುರಕೆ ಭವ್ಯ ಶೃಂಗಾರ
ಮಾಡುತ್ತಾ ಸಾಗೋಣ ನಮಸ್ಕಾರ.
ರಚನೆ : ಡಾ. ಪ್ರಭಾಕರ ಬೆಲವಾಡಿ
ಚಿತ್ರಾನ್ನ ತಿನ್ನೋಣ ತುರಿಯೇ ಮಾವು
ಹೆಣ್ಣಿನ ಮೊಗದಾಗ ಹರುಷಾದ ಹೊನಲು
ಕಾತರದಿ ಕಾದಾರ ಹೊಸ ವಸ್ತ್ರವ ತೊಡಲು
ತೋಟದಾ ತುಂಬಾ ಚಿಗುರಾವೆ ಫಸಲು
ತಾರವ್ವ ಬುಟ್ಟಿ ತಿಂದಾವು ಗಿಳಿ ಮತ್ತ ಅಳಿಲು
ಊರ ತುಂಬೆಲ್ಲಾ ಬೇವಿನಾ ಒಗರು
ಸುತ್ತ ನೋಡತ್ತ ಮಾವಿನಾ ಚಿಗುರು
ಅವ್ವ ಮಾಡ್ಯಾಳ ಹೋಳಿಗೆ, ಸಾರು
ಕೈ ಕಾಲ ತೊಳೆದು ಚಪ್ಪರಿಸಿ ಹೀರು.
ಗಿಡವೆಲ್ಲಾ ಬಸಿರು ಊರೆಲ್ಲಾ ಹಸಿರು
ಎಳೆಯೋ ತೇರು ಬಿಡದೇ ಉಸಿರು
ಗುಡಿ ಗೋಪುರಕೆ ಭವ್ಯ ಶೃಂಗಾರ
ಮಾಡುತ್ತಾ ಸಾಗೋಣ ನಮಸ್ಕಾರ.
ರಚನೆ : ಡಾ. ಪ್ರಭಾಕರ ಬೆಲವಾಡಿ
ಮಂಗಳವಾರ, ಮಾರ್ಚ್ 7, 2023
ಮುದುಕಿ , ನಾ ಕಂಡ ಮಹಿಳೆ
this photo courtesy PINTEREST
ಎಲ್ಲಿ ಹೋದೆ ಮುದುಕಿ
ನಿತ್ಯ ನೇಮದಿ ಬರುವಾಕಿಬಾಯಾಗೆ ಎಲಿ ಅಡಿಕಿ
ಮೆಲ್ಲ ಮೆಲ್ಲನೆ ಮೆದುಕಿ
ಪಿಚ್ ಅಂತ ಉಗಳಾಕಿ
ಚೀಲ ಸೊಂಟಕ ನೂಕಿ
ಬುಟ್ಟಿಯಲಿ ಬೆರಣೀಯ ಹಾಕಿ
ತಲಿ ಮ್ಯಾಲ ಸಿಂಬಿಯನು ನೂಕಿ
ಊರೆಲ್ಲಾ ಮಾರುತಾ ತಿರುಗಾಕಿ
ಗೋಡೆಯ ಮೇಲೆ ಗೆರೆ ಬರದಾಕಿ
ಊರ ಸುದ್ದಿಯನೆಲ್ಲಾ ಹೇಳಾಕಿ
ಎಲಿ ಅಡಕಿ ಕೊಟ್ಟವರ ಹೊಗಳಾಕಿ
ಕೊಡದವರ ಉಗುಳುಗುಳಿ ತೆಗಳಾಕಿ
ಬುಟ್ಟಿ ಹಿಡಿದೆತ್ತವ್ವ ಮೇಲೆ ಅನ್ನಾಕಿ
ಎಲ್ಲಿ ಹೋದಿಯಬೇ ಮುದುಕಿ
ಮನಿ ಮುಂದೆ ಬಂದು ನಿಲ್ಲಾಕಿ
ಬೋಣಿ ನಿಮದೇರೀ ಅನ್ನಾಕಿ
ಬ್ಯಾಡೆಂದ್ರು ಒಟ್ಟಿ ಹೋಗ್ಯಾಕಿ.
ರಚನೆ ಡಾ. ಪ್ರಭಾಕರ ಬೆಲವಾಡಿ
ಮೆಲ್ಲ ಮೆಲ್ಲನೆ ಮೆದುಕಿ
ಪಿಚ್ ಅಂತ ಉಗಳಾಕಿ
ಚೀಲ ಸೊಂಟಕ ನೂಕಿ
ಬುಟ್ಟಿಯಲಿ ಬೆರಣೀಯ ಹಾಕಿ
ತಲಿ ಮ್ಯಾಲ ಸಿಂಬಿಯನು ನೂಕಿ
ಊರೆಲ್ಲಾ ಮಾರುತಾ ತಿರುಗಾಕಿ
ಗೋಡೆಯ ಮೇಲೆ ಗೆರೆ ಬರದಾಕಿ
ಊರ ಸುದ್ದಿಯನೆಲ್ಲಾ ಹೇಳಾಕಿ
ಎಲಿ ಅಡಕಿ ಕೊಟ್ಟವರ ಹೊಗಳಾಕಿ
ಕೊಡದವರ ಉಗುಳುಗುಳಿ ತೆಗಳಾಕಿ
ಬುಟ್ಟಿ ಹಿಡಿದೆತ್ತವ್ವ ಮೇಲೆ ಅನ್ನಾಕಿ
ಎಲ್ಲಿ ಹೋದಿಯಬೇ ಮುದುಕಿ
ಮನಿ ಮುಂದೆ ಬಂದು ನಿಲ್ಲಾಕಿ
ಬೋಣಿ ನಿಮದೇರೀ ಅನ್ನಾಕಿ
ಬ್ಯಾಡೆಂದ್ರು ಒಟ್ಟಿ ಹೋಗ್ಯಾಕಿ.
ರಚನೆ ಡಾ. ಪ್ರಭಾಕರ ಬೆಲವಾಡಿ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)
ಊರ ಕನ್ನಿಕೆ ಊರ ಬಯಕೆ
ಊರ ಕನ್ನಿಕೆ ಊರ ಬಯಕೆ ಡಾ ಬೆಳವಾಡಿ ಪ್ರಭಾಕರ್ ಊರ ಕೆರಿಯ ದಂಡೆಯ ಬಂಡೆಯ ಮ್ಯಾಗೆ ರಟ್ಟೆಯನೆತ್ತಿ ಕನ್ಯೆ ಬಟ್ಟೆಯನೊಗೆದಿತ್ತು ಸೀರಿಯ ನೆರಿಗೆಯ ಮಿಂಚಿನ ...
-
ಬಿ. ಎಂ. ಶ್ರೀ. ಗೆ ಅರ್ಚನೆ ನವೋದಯದರಸನೆ, ನವ್ಯ ಸ್ಥಾಪಕನೆ ಕನ್ನಡದ ಕಣ್ವನೆಂಬಿರುದು ಪಡೆದವನೆ ಉಸಿರ ಕೊಸರಿರುವನಕ ಕನ್ನಡವನೆ ನೆಡುವಂತೆ, ನುಡಿವಂತೆಸಗಿದವನೆ ...
-
ಗೋವ ಕಾಯುವನಲ್ಲ ಗೋಪಿಯರ ಕಾಡುವ ನಲ್ಲ, ಗೋವ ಕಾಯುವವರೆಲ್ಲ, ಆಗುವರೇ ಇಂತ ಗೊಲ್ಲ? ಸುರಿಸುತ ಬಾಯಲಿ ಜೊಲ್ಲ, ಬೆಣ್ಣೆ ನಿತ್ಯ ಕದಿಯುತಿಹನಲ್ಲ, ಯಶೋದೆಗ...
-
ಪ್ರೀತಿಯ ಪತಿದೇವ ಕಳಿಸೋ ನನ್ ತವರೀಗೆ (ಜಾನಪದ ಗೀತೆ ರಚಿಸುವ ಪ್ರಥಮ ಪ್ರಯತ್ನ) ಸತಿ: ಪ್ರೀತಿಯ ಪತಿದೇವ ಕಳಿಸೋ ನನ್ ತವರೀಗೆ ಪ್ರೀತಿಯ ಪತಿದೇವ ಕಳಿಸೋ ನನ್ ತವರೀಗೆ ...
