ಶನಿವಾರ, ಅಕ್ಟೋಬರ್ 10, 2020

ಅಂತಿಂತ ಗೊಲ್ಲ ಇವನಲ್ಲ,

 

ಗೋವ ಕಾಯುವನಲ್ಲ

ಗೋಪಿಯರ ಕಾಡುವ ನಲ್ಲ,

ಗೋವ ಕಾಯುವವರೆಲ್ಲ,

ಆಗುವರೇ ಇಂತ ಗೊಲ್ಲ?

 

ಸುರಿಸುತ ಬಾಯಲಿ ಜೊಲ್ಲ,

ಬೆಣ್ಣೆ ನಿತ್ಯ ಕದಿಯುತಿಹನಲ್ಲ,

ಯಶೋದೆಗೆ ಮುನಿಸು ಬರಲಿಲ್ಲ,

ಅಲ್ಲವೇ ಅವಳ ಮುದ್ದಿನ ನಲ್ಲ.


 

ಗೋಪಿಯರಿಗೆಲ್ಲ ಇವನೇ ನಲ್ಲ,

ಆದರೂ ಅವರ ಕೂಡಿದವನಲ್ಲ,

ರಾಧೆಯ ಬಿಡದೆ ಆಡಿಸಿದನಲ್ಲ,

ಕಡೆಗೂ ಅವಳ ವರಿಸಿದವನಲ್ಲ.

 

ರುಕ್ಮಿಣಿಯ ಅಪಹರಿಸಿದನಲ್ಲ,

ಸತ್ಯಭಾಮೆಯನು ಬಿಡಲೊಲ್ಲ,

ಜಾಂಬುವತಿಯನು ಪಡೆದನಲ್ಲ,

ಮೋಹಿನಿಯಾಗು ನಿಂತನಲ್ಲ.

 

ಧರ್ಮ ಎತ್ತಿ ಹಿಡಿದ ಮಲ್ಲ,

ಅಧರ್ಮಿಗಳ ಬಿಡಲಿಲ್ಲ,

ಸುಧಾಮನ ಮರೆತವನಲ್ಲ,

ಪ್ರೇಮದ ಬೀಜ ಬಿತ್ತಿಹನಲ್ಲ.

 

ಪಾರ್ಥ ಇಟ್ಟಿರಲು ಬಿಲ್ಲ,

ವಿರಾಟ ರೂಪ ತೋರಿಹನಲ್ಲ,

ಗೀತೆಯ ತಾ ಸಾರಿದನಲ್ಲ,

ಜಯದ ನಾಂದಿ ಹಾಡಿದನಲ್ಲ.

 

ಅಂತಿಂತ ಗೊಲ್ಲ ಇವನಲ್ಲ,

ಇವನಂತ ಗೊಲ್ಲ ಇನ್ನಿಲ್ಲ,

ಕೊಳಲನೂದುತ ಕುಳಿತಿಹನಲ್ಲ,

ಆಡಿಸುತ ನಾದದಿ ಈ ಜಗವನೆಲ್ಲ.


Acknowledge with thanks for photos .

krishnaart.tumblr.com , picclick.com, pinterest jpeg


3 ಕಾಮೆಂಟ್‌ಗಳು:

ಆಧನಿಕ ರೈತ

ಆಧನಿಕ ರೈತ ರೈತರ ಬಗ್ಗೆ ಗೊತ್ತೇ ನಿಮಗೆ ರೈತರು ಇಹರು ಎರಡು ಬಗೆ ಅನ್ನವ ನೀಡುವ ಅನ್ನದಾತ ಕನ್ನವ ಹಾಕುವ ಕನ್ನದಾತ ಉಳುವಾ ರೈತನ ನೋಡಲ್ಲಿ ರೈತನ ನೇಗಿಲು ನೇತಲ್ಲಿ ...