ಭಾನುವಾರ, ಏಪ್ರಿಲ್ 11, 2021

ಮಧುಚಂದ್ರ ಹೀಗೊಂದು

 ಮಧುಚಂದ್ರ ಹೀಗೊಂದು 



ಸೆರಗ ಸರಿಸಿ ನಗೆಯ ಬಿಟ್ಟೆ

ಲೋಟ ತುಂಬ ಹಾಲು ಕೊಟ್ಟೆ

ಹಣ್ಣ ಕಚ್ಚಿ ತುಟಿಯಂಚಲಿಟ್ಟೆ 

ತುಟಿಗೆ ತುಟಿಯ ತಂದು ಬಿಟ್ಟೆ.


ನಿನ್ನ ಬೆರಳ ಆಡ ಬಿಟ್ಟೆ

ನನ್ನದನ್ನೂ ಹರಿಸಿ ಬಿಟ್ಟೆ

ಎತ್ತಿ ನನ್ನ ಕೆಳಗೆ ಬಿಟ್ಟೆ

ಉರುಳಿ ನಾ ನಕ್ಕು ಬಿಟ್ಟೆ.


ಹೆರಳ ಹರಡಿ ಇಳಿಯ ಬಿಟ್ಟೆ

ನಿನ್ನ ಮೊಗವ ಮುಚ್ಚಿ ಇಟ್ಟೆ

ಹಿಡಿದು ರಟ್ಟೆ ಕಚ್ಚಿ ಬಿಟ್ಟೆ

ತುಟಿಗೆ ಮತ್ತೆ ಮುತ್ತನಿಟ್ಟೆ.


ಚಳಿಯ ಸರಿಸಿ ಲಜ್ಜೆ ಬಿಟ್ಟೆ

ನಿನ್ನೆ ನಾನು ಹೊದ್ದು ಬಿಟ್ಟೆ

ನನ್ನ ಪೊರೆಯ ಕಳಚಿ ಇಟ್ಟೆ 

ತುಂಟ ಪೂರ್ತಿ ತೃಪ್ತಿ ಪಟ್ಟೆ.


ಹಾರಿ ಬಂದ ನನ್ನ ಚಿಟ್ಟೆ

ನಿನ್ನ ತುಟಿಯ ಊರಿ ಬಿಟ್ಟೆ

ಮೈಯ್ಯ ತುಂಬ ಚುಕ್ಕಿ ಇಟ್ಟೆ

ಸ್ವರ್ಗ ಧರೆಗೆ ಇಳಿಸಿ ಬಿಟ್ಟೆ.


ನನ್ನ ತನವ ಅಳಿಸಿ ಬಿಟ್ಟೆ

ನಿನ್ನ ಬಳಿಯೇ ಅಡವು ಇಟ್ಟೆ

ನೀನು ನನಗೆ ಮಾತು ಕೊಟ್ಟೆ

ನಿನ್ನ ಸುಖವ ನನ್ನಲಿಟ್ಟೆ.


-----------------------------------

ರವಿಯೇ ನೀ ಉದಿಸಿ ಬಿಟ್ಟೆ

ಹೊಟ್ಟೆಕಿಚ್ಚು ಏಕೆ ಪಟ್ಟೆ

ಪರದೆ ಏಕೆ ಸರಿಸಿ ಬಿಟ್ಟೆ 

ನನ್ನ ಬತ್ತಲೆ ತೋರಿಸಿ ಬಿಟ್ಟೆ.


https://images.app.goo.gl/JknLHyFkcs6ta19V9

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಆಧನಿಕ ರೈತ

ಆಧನಿಕ ರೈತ ರೈತರ ಬಗ್ಗೆ ಗೊತ್ತೇ ನಿಮಗೆ ರೈತರು ಇಹರು ಎರಡು ಬಗೆ ಅನ್ನವ ನೀಡುವ ಅನ್ನದಾತ ಕನ್ನವ ಹಾಕುವ ಕನ್ನದಾತ ಉಳುವಾ ರೈತನ ನೋಡಲ್ಲಿ ರೈತನ ನೇಗಿಲು ನೇತಲ್ಲಿ ...